ಮುಖ್ಯ ವಿಷಯಕ್ಕೆ ತೆರಳಿ

ಹುಡುಕಿ

ಸಹಾಯ ಲೇಖನಗಳನ್ನು ಹುಡುಕಲು ಒಂದು ಪದ ಅಥವಾ ಪ್ರಶ್ನೆಯನ್ನು ಟೈಪ್ ಮಾಡಿ.

ಪ್ರಶ್ನೋತ್ತರಗಳ ಮೂಲಕ ಪರಿಹಾರ ನೀಡುವ ಟ್ರಬಲ್‌ಶೂಟರ್ ರಚಿಸುವುದು ಹೇಗೆ?

ಈ ಲೇಖನದಲ್ಲಿ

ಪ್ರಾರಂಭಿಸುವ ಮೊದಲು

  • ನಿಮಗೆ ಹೆಲ್ಪ್ ಸೆಂಟರ್ ನಿರ್ವಹಿಸುವ ಅನುಮತಿ (permission) ಇರಬೇಕು.
  • ನಿಮ್ಮ ಪರಿಹಾರದ ಲೇಖನಗಳನ್ನು ಮೊದಲೇ ಬರೆದಿಟ್ಟುಕೊಳ್ಳಿ. ಪರಿಹಾರದ ಹಂತವು ಅದಕ್ಕೆ ಲಿಂಕ್ ನೀಡಬಹುದು.
  • ಈ ಟ್ರೀ ಅನ್ನು JSON ಪಠ್ಯ ರೂಪದಲ್ಲಿ ಮುಂದುವರಿದ (advanced) ಬಾಕ್ಸ್‌ನಲ್ಲಿ ಟೈಪ್ ಮಾಡಲಾಗುತ್ತದೆ. ನಿಧಾನವಾಗಿ ಕೆಳಗಿನ ಉದಾಹರಣೆಯನ್ನು ನೋಡಿ ಕಾಪಿ ಮಾಡಿ.

ಹಂತಗಳು

  1. Stories ತೆರೆಯಿರಿ ಮತ್ತು Troubleshooters ಆಯ್ಕೆಮಾಡಿ. ಇದು ಟ್ರಬಲ್‌ಶೂಟರ್‌ಗಳ ಪಟ್ಟಿಯನ್ನು ತೆರೆಯುತ್ತದೆ.
  2. New ಆಯ್ಕೆಮಾಡಿ.
  3. Title ಭರ್ತಿ ಮಾಡಿ. ಐಚ್ಛಿಕ: Summary ಮತ್ತು Platform, ಉದಾಹರಣೆಗೆ ಸಮಸ್ಯೆಗೆ ಸಂಬಂಧಿಸಿದ ಡಿವೈಸ್ ಅಥವಾ ಆ್ಯಪ್.
  4. tree ಫೀಲ್ಡ್‌ನ ಬಾಕ್ಸ್‌ನಲ್ಲಿ, ನಿಮ್ಮ ಟ್ರೀ ಅನ್ನು ಟೈಪ್ ಮಾಡಿ. ಇದನ್ನು "advanced" ಎಂದು ಗುರುತಿಸಲಾಗಿದೆ. ಕೆಳಗಿನ ಉದಾಹರಣೆಯನ್ನು ಬಳಸಿ.
  5. ಬಾಕ್ಸ್‌ನಲ್ಲಿ "That is not valid JSON, so it was not applied." ಎಂದು ಬಂದರೆ, ಎಲ್ಲಿಯಾದರೂ ಕಾಮಾ ಅಥವಾ ಕೋಟ್ ಬಿಟ್ಟುಹೋಗಿದೆಯೇ ಎಂದು ಪರಿಶೀಲಿಸಿ.
  6. ಈ ಎಂಟ್ರಿಯನ್ನು ಸರಿಯಾದ ಹಬ್ ವಿಭಾಗದಲ್ಲಿ ಇರಿಸಿ, ನಂತರ ಪ್ರಕಟಿಸಿ.

ಟ್ರೀ ರಚನೆ ಹೇಗಿರುತ್ತದೆ

ಒಂದು ಟ್ರೀ start ಮತ್ತು nodes ಪಟ್ಟಿಯನ್ನು ಹೊಂದಿರುತ್ತದೆ. ಇದರಲ್ಲಿ ಮೂರು ರೀತಿಯ ನೋಡ್‌ಗಳಿವೆ:

  • QUESTION ಇದು text ಮತ್ತು 2 ರಿಂದ 8 answers ಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಉತ್ತರಕ್ಕೂ label ಮತ್ತು ಇನ್ನೊಂದು ನೋಡ್ ಅನ್ನು ಹೆಸರಿಸುವ next ಇರುತ್ತದೆ.
  • FIX ಇದು text ಅನ್ನು ಹೊಂದಿರುತ್ತದೆ. ಇದು articleId (ನಿಮ್ಮ ಪ್ರಕಟಿತ ಲೇಖನಗಳಲ್ಲೊಂದರ ಸಂಖ್ಯೆ) ಅಥವಾ https url ಅನ್ನೂ ಹೊಂದಿರಬಹುದು.
  • CONTACT ಈ ಹಂತವು ನಿಮ್ಮ "ಇನ್ನೂ ಸಹಾಯ ಬೇಕೇ?" ಪ್ಯಾನೆಲ್‌ನಲ್ಲಿ ಕೊನೆಗೊಳ್ಳುತ್ತದೆ.
ಕೋಡ್
{
  "start": "q1",
  "nodes": [
    { "id": "q1", "kind": "QUESTION", "text": "Do you remember your password?",
      "answers": [ { "label": "Yes", "next": "q2" }, { "label": "No", "next": "f-reset" } ] },
    { "id": "q2", "kind": "QUESTION", "text": "Is two-step sign-in on?",
      "answers": [ { "label": "Yes", "next": "f-code" }, { "label": "No", "next": "c1" } ] },
    { "id": "f-reset", "kind": "FIX", "text": "Reset your password from the sign-in page.", "articleId": 1007 },
    { "id": "f-code", "kind": "FIX", "text": "Check your phone's clock and use a backup code." },
    { "id": "c1", "kind": "CONTACT", "text": "We can help you personally." }
  ]
}

ನೀವು ಸೇವ್ ಮಾಡುವಾಗ ಸೈಟ್ ಪರಿಶೀಲಿಸುವ ನಿಯಮಗಳು

  • 1 ರಿಂದ 50 ನೋಡ್‌ಗಳು.
  • ನೋಡ್ ಐಡಿಗಳು ಸಣ್ಣ ಅಕ್ಷರಗಳು (lower-case), ಅಂಕಿಗಳು ಮತ್ತು ಡ್ಯಾಶ್‌ಗಳನ್ನು ಬಳಸುತ್ತವೆ, ಗರಿಷ್ಠ 40 ಅಕ್ಷರಗಳು, ಅಕ್ಷರ ಅಥವಾ ಅಂಕಿಯಿಂದ ಪ್ರಾರಂಭವಾಗಬೇಕು. ಪ್ರತಿ ಐಡಿಯನ್ನು ಒಮ್ಮೆ ಮಾತ್ರ ಬಳಸಲಾಗುತ್ತದೆ.
  • ಒಂದು ಪ್ರಶ್ನೆಗೆ 2 ರಿಂದ 8 ಉತ್ತರಗಳಿರಬೇಕು ಮತ್ತು ಪ್ರತಿಯೊಂದು ಉತ್ತರವೂ ಅಸ್ತಿತ್ವದಲ್ಲಿರುವ ನೋಡ್‌ಗೆ ಲಿಂಕ್ ಆಗಿರಬೇಕು.
  • ಪ್ರತಿಯೊಂದು ನೋಡ್ ಅನ್ನು ಸಹ start ನಿಂದ ತಲುಪಲು ಸಾಧ್ಯವಿರಬೇಕು.
  • ಟ್ರೀ ಲೂಪ್ ಆಗಬಾರದು. ಒಂದು ಉತ್ತರವು ಹಿಂದಿನ ಪ್ರಶ್ನೆಗೇ ಮರಳಿ ಕೊಂಡೊಯ್ದರೆ, ಹೀಗೆ ಕಾಣಿಸುತ್ತದೆ: "This troubleshooter loops back to an earlier step. Every path must end with a fix or contact step."
  • ಟ್ರೀ ಗರಿಷ್ಠ 32 KB ವರೆಗೆ ಇರಬಹುದು.

ತಿಳಿದಿರಬೇಕಾದ ವಿಷಯಗಳು

  • ಪ್ರಕಟವಾದ ಪ್ರತಿಯೊಂದು ಟ್ರಬಲ್‌ಶೂಟರ್ ನಿಮ್ಮ ಸೈಟ್‌ನಲ್ಲಿ ತನ್ನದೇ ಆದ ಪ್ರತ್ಯೇಕ ಪುಟವನ್ನು ಹೊಂದಿರುತ್ತದೆ.
  • ಇನ್‌ಸೈಟ್‌ಗಳು. ಓದುಗರು ಯಾವ ಪರಿಹಾರಗಳನ್ನು ತಲುಪುತ್ತಾರೆ ಎಂಬುದನ್ನು ನೋಡಲು Help insights ಪುಟವು Where troubleshooters ended ಅನ್ನು ತೋರಿಸುತ್ತದೆ.
  • articleId ಹೊಂದಿರುವ ಪರಿಹಾರವು ಆ ಲೇಖನ ಪ್ರಕಟವಾಗಿರುವಾಗ ಮಾತ್ರ ಅದಕ್ಕೆ ಲಿಂಕ್ ಆಗಿರುತ್ತದೆ.

ಸಾಮಾನ್ಯ ಸಮಸ್ಯೆಗಳು

  • "This troubleshooter loops back to an earlier step." ಒಂದು ಉತ್ತರವು ಹಿಂದಿನ ಹಂತವನ್ನೇ ತೋರಿಸುತ್ತಿದೆ. ಅದರ next ಅನ್ನು ಪರಿಹಾರ ಅಥವಾ ಸಂಪರ್ಕ ನೋಡ್‌ಗೆ ಬದಲಾಯಿಸಿ.
  • ಟ್ರೀ ಕುರಿತು ಸೇವ್ ಮಾಡುವಾಗ ದೋಷ. ಈ ದೋಷವು fields.tree ಅನ್ನು ಹೆಸರಿಸುತ್ತದೆ. ಒಂದು ನೋಡ್‌ನಲ್ಲಿ text ಅಥವಾ ಮಾನ್ಯವಾದ next ನಂತಹ ಭಾಗ ಬಿಟ್ಟುಹೋಗಿದೆ. ಉದಾಹರಣೆಯೊಂದಿಗೆ ಹೋಲಿಸಿ ನೋಡಿ.

ಪ್ರಶ್ನೆಗಳು

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

articleId ಗಾಗಿ ಸಂಖ್ಯೆಯನ್ನು ನಾನು ಎಲ್ಲಿ ಕಂಡುಹಿಡಿಯುವುದು?

ಎಡಿಟರ್‌ನಲ್ಲಿ ಲೇಖನವನ್ನು ತೆರೆಯಿರಿ. ನಿಮ್ಮ ಅಡ್ಮಿನ್‌ನಲ್ಲಿರುವ ಅದರ ವೆಬ್ ವಿಳಾಸದ ಕೊನೆಯಲ್ಲಿ ಆ ಸಂಖ್ಯೆ ಇರುತ್ತದೆ.

ನಾನು ಟ್ರೀ ಅನ್ನು ಡ್ರಾ (ಡಿಸೈನ್) ಮಾಡಬಹುದೇ?

ಪ್ರಸ್ತುತ ಅಡ್ಮಿನ್‌ನಲ್ಲಿ ಡ್ರಾಯಿಂಗ್ ಟೂಲ್ ಲಭ್ಯವಿಲ್ಲ. ನೀವು ಟ್ರೀ ಅನ್ನು ಟೈಪ್ ಮಾಡಬೇಕಾಗುತ್ತದೆ.

ಸಂಬಂಧಿತ ಮಾಹಿತಿ

ಪ್ರತಿಕ್ರಿಯೆ

ಇದು ಸಹಾಯಕವಾಗಿದೆಯೇ?

ಇದರಲ್ಲೂ ಲಭ್ಯವಿದೆ

ಇನ್ನೂ ಸಹಾಯ ಬೇಕೇ?